ಕಲಾಪೋಷಕರೆಲ್ಲರಿಗೂ ನಮಸ್ಕಾರ
ನಮ್ಮ ಬಂಟರ ಸಂಘ ಉತ್ತರ ಪ್ರಾದೇಶಿಕ ಸಮಿತಿಯ ವತಿಯಿಂದ ಆಯೋಜಿಸಿರುವ “ಛತ್ರಪತಿ ಶಿವಾಜಿ” ನಾಟಕ ಪ್ರದರ್ಶನಕ್ಕೆ ತಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ .
ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ನಿರ್ದೇಶನದ ‘ಕಲಾಸಂಗಮ’ದ ‘ಶಿವದೂತ ಗುಳಿಗ’ ಕಲಾವಿದರಿಂದ ಮೂಡಿಬರುವ ‘ಛತ್ರಪತಿ ಶಿವಾಜಿ’ ನಾಟಕದ ಒಂದೇ ಒಂದು ಪ್ರದರ್ಶನವು ಇದೇ ಬರುವ 27 ನೇ ಗುರುವಾರ ಮಧ್ಯಾಹ್ನ 3.30 ಕ್ಕೆ “ಬಂಟರ ಭವನ, ಬಾಣೇರ್” ನಲ್ಲಿ ನಮ್ಮ ಎಲ್ಲಾ ಕಲಾಭಿಮಾನಿಗಳಿಗೆ ಉಚಿತವಾಗಿ ನೋಡುವ ಸುವರ್ಣಾವಕಾಶವಿದೆ .
ಮರಾಠ ಸಾಮ್ರಾಜ್ಯದ ಸಂಸ್ಥಾಪಕರಾದ ಶಿವಾಜಿ ಮಹಾರಾಜರ ವೀರಗಾಥೆಯನ್ನು ಕಣ್ತುಂಬಿಕೊಳ್ಳಲು ತಾವೆಲ್ಲರೂ ಕುಟುಂಬ ಸಮೇತರಾಗಿ ದಯವಿಟ್ಟು ಆಗಮಿಸಿ .
ನಿಮ್ಮ ಉಪಸ್ಥಿತಿಯೇ ನಮಗೆ ಪ್ರೋತ್ಸಾಹ.
* ಕಾರ್ಯಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ,
ಬಂಟರ ಸಂಘ ಉತ್ತರ ಪ್ರಾದೇಶಿಕ ಸಮಿತಿ , ಪುಣೆ






















































